ಸುಮಾರು ಎರಡು ವರ್ಷದಿಂದ ನನಗೆ ಮದುವೆ ಮಾಡುವುದು ನನ್ನ ತಾಯಿಯ ಪ್ರಮುಖ ಆಸಕ್ತಿ ಯಾಗಿದೆ. ನನ್ನ ಸಹಪಾಟಿಗಳು ಮದುವೆಯಗುವುದನ್ನು ಕೇಳಿ ನಮ್ಮ ಅಮ್ಮನಿಗೂ ತನ್ನ ಮಗನ ವಿವಾಹವು ಶೀಘ್ರಧಲ್ಲಿ ನೆರವೇರಲಿ ಅಂತ ಬಯಸುತಿದ್ದರು. ನನಗೆ ತತಕ್ಷಣ ಮದುವೆಯಾಗಲು ಅಂತಹ ಇಚೆಯೇನು ಇರಲಿಲ್ಲ. ಮದುವೆಯಾಗಲು ತುಂಬಾ ಸಮಯವಿದೆ ಯೆಂಬುದು ನನ್ನ ಅನಿಸಿಕೆ ಯಾಗಿತು. ಈ ನನ್ನ ಅನಿಸಿಕೆ ಇಂದ ನನ್ನ ಅಮ್ಮನ ಆಸಕ್ತಿ ಕಾಲಕ್ರಮೇಣ ಚಿಂತೆಯರುಪಗೊಂಡಿತು(೧).
ಮೂವತ್ತು ವರ್ಷ ಹತ್ತಿರ ಬರಿತಿರುವಾಗ ಮದುವೆಯಾಗುವುದರ ಬಗ್ಗೆ ಶುರುಮಾಡಿದೆ(೨). ಸುಮಾರು ಹತ್ತು ತಿಂಗಳ ಹಿಂದೆ ಮದುವೆಯಾಗಲು ಹುಡಗಿಯನ್ನು ಹುಡುಕಲು ನನ್ನ ತಂದೆ ಮತ್ತು ತಾಯಿಗೆ ಒಪಪ್ಪಿಗೆ ಕೊಟ್ಟೆ. ಅದನ್ನು ಕೇಳಿ ನನ್ನ ಅಮ್ಮನಿಗೆ ತುಂಬಾನೇ ಸಂತೋಷವಾಯಿತು.ಆದರೆ ಆಂದಿಕೊಂಡಸ್ಟು ಸುಲುಭವಲ್ಲ ಮದುವೆ ಯಾಗುವುದು ಯೆಂಬುವು ಯೆಲ್ಲರಿಗೂ ತಿಳಿದ ವಿಷಯವೆ. ಕೆಲವು ಹುಡಗೀಯರನ್ನು ಬೇಟಿ ಆದನಂತರ ಮದುವೆ ಅಗುವದನ್ನು ಮುಂದೆಹಾಕಲು ಯೋಚನೆ ಮಾಡುವದರಲ್ಲಿ ನನ್ನ ಮನಸ್ಸು ತೊಡಗಿತು. ಆದರೆ ನಮ್ಮ ಅಪ್ಪ ಅಮ್ಮ ಮತ್ತು ನನ್ನ ಚಿಕ್ಕಪ್ಪಾ ಗೋಪಾಲಕೃಷ್ಣ ಮೂರ್ತಿ ಮತ್ತೆ ಚಿಕ್ಕಮ್ಮ ಶಾಂತ ಅವರು ನನಗೆ ಲಗ್ನ ಮಾಡುವ ಪ್ರಯತ್ನ ವನ್ನು ಮಾಡುತ್ತಲೆ ಇದ್ದರು. ಈ ಸಮಯದಲಿ ಒಬ್ಬಳು ಮೆಕ್ಯಾನಿಕಲ್ ಇಂಜಿನಿಯರ್ ಹುಡಗಿಯ ಜಾತಕ ಮತ್ತು ಛಾಯಾ ಚಿತ್ರ ವನ್ನು ಚಿಕ್ಕಪ್ಪ ನನಗೆ ಕಳಿಸಿದರು. ಅದನ್ನು ನೋಡಿದ ಮೇಲೆ ನಾನು ಏನು ಹೇಳಲಿಲ್ಲ ಅವರಿಗೆ. ತನ್ನ ಅಣ್ಣ, ಅರ್ಥಾತ್ ನಮ್ಮ ಅಪ್ಪನಿಗೆ ಈ ವಿಷಯ ತೆಳಿಸಲು ಚಿಕ್ಕಪ್ಪ ಮತ್ತೆ ಚಿಕ್ಕಮ್ಮ ಮನೆಗೆ ಬಂದರು. ನಮ್ಮ ಅಪ್ಪ ಅಮ್ಮನ ಮುಂದೆ ನನ್ನ ಚಿಕ್ಕಮ್ಮ ನನ್ನನು ಕೇಳಿದರು "ಏನಪ್ಪ ಗಣೇಶ ಹುಡಗಿ ನೋಡಕ್ಕೆ ಹೇಗಿದಾಳೆ?" ನಾನು ಅದಕ್ಕೆ "ಪರವಾಗಿಲ್ಲ ನೋಡಕ್ಕೆನೋ ಚೆನ್ನಾಗಿದ್ದಾಳೆ " ಅದಾದ ನಂತರ ಹುಡಗಿನ ನೊಡಬಹುದೆ ಅಂತ ಕೆಳಿದ್ದಕೆ ನನ್ನು ಈಗಲೇ ಬೇಡ ಅಂತ ಹೇಳಿದೆ. ಅದನೂ ಕೇಳಿದ ನನ್ನ ಚಿಕ್ಕಪ್ಪ ನನ್ನ ಬಳಿ ಕುಳಿತು ಚೆರ್ಚೆ ಶುರು ಮಾಡಿದರು. ತುಂಬಾ ಪ್ರೆಶ್ನೆಗಳನ್ನು ಕೇಳಿದರು. ಕೆಲವು ಪ್ರಶ್ನೆ ಗಳು ಹೀಗಿದ್ದವು - "ಯಾಕೆ ಈಗ ಬೇಡ?" "ಹುಡಗಿನ ನೊಡದ್ರಲ್ಲಿ ನಿನಗೆ ಏನು ತೊಂದರೆ" "ಈವಾಗ ಅಲ್ದೆಲೆ ಇನ್ನ್ಯವಾಗ ಮದುವೆಗೆ ಸಿಧ್ಹವಾಗತ್ಯ?" ಚೆರ್ಚೆಯ ನಂತರ ಹುಡಗಿ ಅಣ್ಣನಿಗೆ ನನ್ನ ಜಾತಕವನ್ನು ಕಳಿಸಿ ಕೊಡಲು ನಾನು ಒಪ್ಪಿಕೊಂಡೆ. ಚಿಕ್ಕಪ್ಪ ಹೋಗುವುದಕ್ಕಿಂತ ಮುಂಚೆ "ನೀನು ಹುಡಗಿಯ ಜತೆ ಮಾತನಾಡು ಅಂತ ಅಷ್ಟೆ ನಾವು ಹೆಳ್ತಿರೊದು, ಮದುವೆಗೆ ಒಪ್ಪಿಗೆ ಅಥವ ಬೇಡ ಅನ್ನುವುದು ಪೂರ್ತಿ ನಿನಗೆ ಬಿಟ್ಟಿರೋದು" ಅಂತ ಹೇಳಿದರು.
ಜಾತಕ ಕೂಡಿಬಂತು ಅಂತ ಚಿಕ್ಕಪ್ಪ ನಮ್ಮ ಅಪ್ಪನಿಗೆ ಹೇಳಿದರು. ಶೇಗ್ರವೇ ಹುಡಗಿಯ ಮನೆ ಮಂದಿಯನ್ನು ಬೇಟಿ ಆಗುವ ಕಾರ್ಯಕ್ರಮವನ್ನು ಚಿಕ್ಕಪ್ಪ ಎರ್ಪಾಡು ಮಾಡಿದರು. ನಾನು ಎಲ್ಲರಿಗು ಎಕೆ ಬೇಜಾರುಮಾಡುವುದು ಅಂತ ಅವರು ಹೇಳಿದಹಾಗೆ ಸಿದ್ದಗೊಂಡೆ. ಹೋಗಕ್ಕಿಂತ ಮುಂಚೆ ನಿರ್ದಾರ ಮಾಡಿದ್ದೆ ಕಂಡಿತವಾಗಿ ಮದುವೆಗೆ ಮಾತ್ರ ಒಪ್ಪಿಕೊಳ್ಳೊದು ಬೇಡ ಅಂತ. ಹುಡಗೀಯ ಚಿತ್ರದಲ್ಲೂ ಕೂಡ ಪೂರ್ತಿ ಕುಷಿ ಕಾಣಿಸಿರಲಿಲ್ಲ. ನಗುದ್ರಲ್ಲು ಏನೋ ಜಿಪಣತನ ಮಾಡಿದಹಾಗೆ ಕಾಣುತಿತ್ತು. ಇಷ್ಟೆಲ್ಲ ಯೋಚನೆಯ ಮದ್ಯೆ ಹುಡಗಿಯನ್ನು ನೋಡಲು ಹುಡಗೀಯ ಹತ್ತಿರದ ಸಂಬಂದ್ದಿಯ ಮನೆಗೆ ತಲಪಿದೆವು. ಹೋದ ಮೇಲೆ ಹುಡಗೀಯ ಅಣ್ಣ ಮತ್ತೆ ಅವರ ತಂದೆ ತಾಯಿ ಮಾತು ಅಲ್ಲೇ ಉಪಸ್ತಿತರೆಲ್ಲರೂ ಆದರದ ಸ್ವಾಗತ ಮಡಿದರು. ಹುಡಗಿ ಕೂಡ ಸ್ವಲ್ಪ ಹೊತ್ತಿನ ನಂತರ ಬಂದಳು. ಮಾತುಕತೆ ಶುರುವಾಯಿತು, ಜತೆಗೆ ಉಪ್ಪಿಟು ಮತ್ತೆ ಗುಲಾಬ್ ಜಾಮೂನು ಕೊಟ್ಟರು ಎಲ್ಲರಿಗು. ಉಪ್ಪಿಟ್ಟು ಮಾತ್ರ ತುಂಬಾನೇ ಚೆನ್ನಗಿತ್ತು. ಇನ್ನೊಂಸತಿ ಹಾಕಿಸ್ಕೊಳ್ಳನ ಅನ್ನುಸ್ತು ಆದರೆ ಯಾಕೆ ಸುಮ್ನೆ ಅಂತ ಹಾಕಿಸ್ಕೊಳ್ಲಿಲ. ದೊಡ್ಡವರೆಲ್ಲ ಮಾತನಾಡಿದ ನಂತರ ಹುಡಗಿಯ ಜತೆ ಮಹಡಿ ಮೇಲೆ ಏಕಾಂತದಲ್ಲಿ ಮಾತನಾಡಲು ಕಳಿಸಿಕೊಟ್ಟರು.
ಸುಮಾರು ಏಳು ಗಂಟೆ ಆಗಿತ್ತು ನಾನು ಅವಳನ್ನು ಬೇಟಿ ಆಗುವ ಹೊತ್ತಿನಲ್ಲಿ . ನನಗೆ ಇದು ಹೊಸದೇನು ಆಗಿರಲಿಲ್ಲ ಅದರಿಂದ ನಾನು ಅರಾಮಾಗಿದ್ದೆ ಆದರೆ ಅವಳಿಗೆ ಈ ತರಹದ ಅನುಭವ ಆಗಿರಲಿಲ್ಲ. ಅವಳು ಕೇವಲ ಇಪ್ಪತ್ತೆರಡು ವರ್ಷದ ಹುಡುಗಿ. ಸ್ವಲ್ಪ ತಿಂಗಳ ಮುಂಚೆ ತಾನೆ ಇಂಜಿನಿಯರಿಂಗ್ ಮುಗಿಸಿದ್ದಳು. ಅವಳ ಕಾಲೇಜಿಗೆ ಮೊದಲ ರಾಂಕ್ ತೆಗದಿದ್ದಳಂತೆ(ಮೆಕ್ಯಾನಿಕಲ್ ನಲ್ಲಿ). ಅವಳ ಏಕೈಕ ಬಯಕೆ ಮುಂದೆಓದುವದು ಎಂದುತಿಳಿದುಬಂತು. ಅವಳ ತಂದೆ ಆರೋಗ್ಯಸ್ತಿತಿ ಹದಗೆಟ್ಟಕಾರಣ ಮದುವೆ ಆಗಲು ಒಪ್ಪಿಕೊಂಡಿದಳು. ನನ್ನ ಮುಂದೆ ಇದ್ದಾಗ ಅವಳು ಸ್ವಲ್ಪ ಭಯದಿಂದ ಮಾತಾಡಲು ಶುರುಮಾಡಿದಳು. ಅವಳ ಮಾತು ಮತ್ತೆ ವರ್ತನೆಯಲ್ಲಿ ಮುಗ್ದತೆ ಎದುಕಾಣುತ್ತಿತ್ತು. ಆವಳ ಆತಂಕವನ್ನು ಕಡಿಮೆ ಮಾಡಲು ನಾನು ಸ್ವಲ್ಪ ಹಾಸ್ಯ ಮಾಡಲು ಶುರುಹಚ್ಚಿಕೊಂಡೆ. ಅವಳಿಗೆ ನಾನು ಮಾಡಿದ ಎಲ್ಲ ಹಾಸ್ಯವು ಕೂಡಲೇ ಆರ್ಥವಾಗಿ ನಕ್ಕಿದಳು. ಅದಾದ ನಂತರ ಸೂಕ್ಷ್ಮ ವಿಚಾರಗಳನ್ನು ಕೂಡ ಮಾತಾನಾಡಿದೆವು. ಸುಮಾರು ಒಂದುಗಂಟೆ ಕಾಲ ಮಾತಾಡಿದನಂತರ ಕೆಳಗೆ ಇಳಿದು ಬಂದೆವು.
ನಾನು ಅನ್ದಿಕೊಂಡಿದ್ದಕಿಂತ ಚೆನ್ನಗೇನೂ ಆಯಿತು, ಆದರೆ ಹುಡಗಿಯ ಮನೆಯವರು ನನ್ನ ಮತ್ತು ಅವಳ ನಿರ್ದಾರವನ್ನು ತಿಳಿಯಲು ಸ್ವಲ್ಪ ಆತುರುದಲ್ಲಿ ಇದ್ದರು. ಹುಡಗಿಯ ಅಣ್ಣ ದುಬೈಯಲ್ಲಿ ಕೆಲಸ ಮಡುತಿದ್ದರು. ಅವರಿಗೆ ತಂಗಿ ಮಾದುವೆ ನಿಶ್ಚಿತ ಮಾಡಿ ಹೋಗ ಬೇಕೆಂಬ ಬಯಕೆ ಇತ್ತು. ನನಗೆ ಅಷ್ಟು ಕಡಿಮೆ ಸಮಯದಲ್ಲಿ ನಿರ್ದಾರ ಮಾಡುವುದು ಸೂಕ್ತ ಅನಿಸಲಿಲ್ಲ. ಆದರೆ ಬೆರೆ ದಾರಿಕೂಡ ಇರಲಿಲ್ಲ. ಇಲ್ಲ ಅನ್ನುವುದಕ್ಕೆ ಯಾವಕಾರಣವು ಮನಸ್ಸಿಗೆ ಬರಲಿಲ್ಲ. ಅವತ್ತು ಏನು ನಿರ್ದರಮಾಡದೆ ಮಲಗಿಕೊಂಡೆ. ಮಾರನೇ ದಿನ ಬೆಳಿಗ್ಗೆ ಎದಮೇಲೆ "ಇದೂ ಆಗಿಹೋಗಲಿ" ಅಂದಿಕೊಂಡು ನಮ್ಮ ಮನೆಯೆಲ್ಲಿ ಯೆಲ್ಲರಿಗು ನನ್ನ ಒಪ್ಪಿಗೆಯನ್ನು ಹೇಳಿದೆ. ಅದಾದನಂತರ ನಮ್ಮ ಅಪ್ಪ ಮತ್ತು ಅಮ್ಮನ ಸಂತಸಕ್ಕೆ ಹುಡಗಿ ಮನೆಯವರಿಂದಲೂ ಒಪ್ಪಿಗೆಯೆಂದು ತಿಳಿದು ಬಂತು. ಈ ರೀತಿಯಾಗಿ ನಾನು ಕೂಡ ಸಂಸಾರ ಬಂದನಕ್ಕೆ ಬೇಳಲಿದ್ದೇನೆ. ಮುಂದೆ ಯೇನು ಆಗತ್ತೆ ಅಂತ ಮುಂದಿನ ಲೇಖನದಲ್ಲಿ ನೋಡಿವ್ರಂತೆ, ಧನ್ಯವಾದಗಳು.
---------------------------------------------------------------------------------------------------------------------------------------------------------------